ಇಡೀ ವಿಶ್ವದಾದ್ಯಂತ ಜನರನ್ನು ತಲ್ಲಣಗೊಳಿಸುತ್ತಿರುವ ಕೊರೋನ ವೈರಸ್ COVID-19 ಸೋಂಕು ಎಲ್ಲರನ್ನೂ ಮನೆಯಲ್ಲಿ ಕೂಡಿ ಹಾಕಿ ತನ್ನ ಅಟ್ಟಹಾಸ ಮೆರೆಯುತ್ತಿದೆ.

ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಹಲವಾರು ಬಹುರಾಷ್ಟ್ರೀಯ, ಐಟಿ ಕಂಪನಿಗಳು ಮತ್ತು ಕಂಪ್ಯೂಟರ್ ಮತ್ತು ಅಂತರ್ಜಾಲದ ಮೇಲೆ ಸಂಪೂರ್ಣವಾಗಿ ಕೆಲಸ ನಿರ್ವಹಿಸುವ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿವೆ.

ಆದರೆ ಕಚೇರಿ ಕೆಲಸದಿಂದ ಬೇಸತ್ತು ಬಂದ ನಾವು ವಿಶ್ರಾಂತಿ ತೆಗೆದುಕೊಳ್ಳುವ ಜಾಗದಲ್ಲೂ ಕೆಲಸ ಮಾಡಬೇಕು ಎಂದರೆ ನಮ್ಮ ಮನಸ್ಸು ಖಂಡಿತ ಆ ಕಡೆ ಈ ಕಡೆ ತಲೆ ಆಡಿಸುತ್ತದೆ.

ಜೊತೆಗೆ ಮನೆಯಲ್ಲಿ ಎದುರಾಗುವ ಸಣ್ಣಪುಟ್ಟ ಅಡಚಣೆಗಳು ನಮ್ಮನ್ನ ಕೆಲಸ ಮಾಡಲು ಬಿಡುವುದೇ ಇಲ್ಲ. ಆದರೂ ಕೆಲಸ ಮಾಡಿ ನಮ್ಮ ಸಂಸ್ಥೆಯ ಬೆಳವಣಿಗೆಯನ್ನು ಕಾಪಾಡಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ.

ಹಾಗಾಗಿ ಈ ವಿಡಿಯೋದಲ್ಲಿ ಮನೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅವುಗಳಿಂದ ಸುಲಭವಾಗಿ ಮುಕ್ತಿ ಪಡೆಯಲು ಟಿಪ್ಸ್ ಗಳನ್ನು ನೀಡಿದ್ದೇವೆ, ಖಂಡಿತ ಇವು ನಿಮಗೆ ಸಹಾಯ ಮಾಡಬಲ್ಲವು.